ಬ್ಲಾಸ್ಟುಲ -
	ಬಹುಕೋಶೀಯ ಪ್ರಾಣಿಗಳ ಯುಗ್ಮ ಭ್ರೂಣವಾಗಿ ಬೆಳೆಯುವ ಹಾಗೂ ಅಭಿವರ್ಧಿಸುವ ಕ್ರಿಯೆಯ ಒಂದು ಮುಖ್ಯ ಹಂತ. ಈ ಹಂತದಲ್ಲಿ ಭ್ರೂಣ ಟೊಳ್ಳಾದ ಚಂಡಿನಾಕಾರದಲ್ಲಿರುತ್ತದೆ. ಒಳಗಿನ ಟೊಳ್ಳಿಗೆ ಬ್ಲಾಸ್ಟೊಸೀಲ್ ಎಂದು ಹೆಸರು. ಇದನ್ನು ಸುತ್ತುವರಿದಂತೆ ಒಂದೇ ಪದರದ ಕೋಶ ಕವಚವುಂಟು. ಇದೇ ಬ್ಲಾಸ್ಟುಲದ ಕೆಳಭಾಗದ ಕಣಗಳಲ್ಲಿ ಶೇಖರವಾಗಿರುತ್ತದೆ. ಬ್ಲಾಸ್ಟುಲ ತನ್ನ ಮುಂದಿನ ಘಟ್ಟದಲ್ಲಿ ಎರಡು ಪದರಗಳಿಂದ ಕೂಡಿದ ಗ್ಯಾಸ್ಟುಲವಾಗಿ ಬೆಳೆಯುತ್ತದೆ.	
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ